Thursday, March 14, 2019

ಜೀವನದ ಜೀವಾಳ ಜರುಗಿದೆಜೀವನದ ಜೀವಾಳ ಜರುಗಿದೆ
ಪ್ರಕೃತಿಯ ಪರಂಪರೆ ನಶಿಸಿದೆ
ಮಾನವ ದಾನವನಾಗಿ ಆರ್ಭಟಿಸುತಿಹನು..
ಧನದಿಂದ ದನದನವರೆಗೆ ಎಲ್ಲವೂ ತನ್ನದೆಂದು 
ಧರೆಯು ದಗ ದಗಿಸುವಂತೆ ಮಾಡಿಹನು...

ಅಭಿವೃದ್ಧಿಯ ಹೆಸರು ಭಯ ತಂದಿದೆ
ವೈಜ್ಞಾನಿಕತೆ ಇಂದ ನಿಂತ ಜಾಗವೂ ನಡುಗಿದೆ
ಮಾನವೀಯತೆಯ ನಿರ್ಮಾಣದಲ್ಲಿ
ಮಾನವೇತರರ ನಿರ್ನಾಮವಾಗುತಿಹುದು...
ಕಣ್ಣೀರಿಗೂ ಬೆಲೆ ನೀಡದೆ
ನಮ್ಮನ್ನು ಕೊಂದು ತಿನ್ನುತಿಹರು...

ಪ್ರತೀಕಾರ ಬಯಸುತಿಹೆನು 
ಪುನಃ ನಮ್ಮವರ ನೋಡ ಬಯಸಿಹೆನು...
ಕಾಡ ಕಡಿದವರ ಕರುಣೆಯ ಪ್ರಶ್ನಿಸುತಿರುವೆನು
ನ್ಯಾಯಾಧೀಶರ ಮುಂದೆ ನ್ಯಾಯ ಕೇಳುತಿಹೇನು
ನನ್ನ ಕಣ್ಣೀರಿಗೆ ತಕ್ಕ ಬೆಲೆ ಬೇಡುತಿಹೇನು...

ನನ್ನವರನು ಕಾಣದೆ 
ಹೋರಾಟದ ಹಾದಿ ಹಿಡಿಯುವ ಬಯಕೆ
ಪಂಜು ಹಿಡಿದು ಕತ್ತಿ ಎತ್ತುವವರು ನಾವಲ್ಲ
ಕೈ ಮುಗಿದು ಬೇಡುವೆನು ಕರುಣೆ ತೋರಯ್ಯ...  
ಮಾತು ಬಾರದ ಮೌನ ಪ್ರಾಣಿಗಳ ಮೇಲೆ
ಎಲ್ಲವನ್ನೂ ನೀಡಿ ಸಲಹಿದ ಪರಿಸರದ 
ಮೇಲೆ ನಿನ್ನ ದಯೆ ತೋರಯ್ಯ...
 - ಶ್ರೀಗುರುಪ್ರಸಾದ್.N.S
PC:-  

Popular posts